ಅಭಿಪ್ರಾಯ / ಸಲಹೆಗಳು

ಭಾವಾಭಿವ್ಯಕ್ತಿಯ ಉತ್ಕಟ ತುಡಿತವೇ ಇಂದಿನ ಆಧುನಿಕ ಸಂವಹನಕ್ಕೆ ಮೂಲ ಪ್ರೇರಣೆ. ಮನುಷ್ಯನ ವಾಕ್ ಸಂವಹನ ಆರಂಭಗೊಂಡಿದ್ದು ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ. ಅದಕ್ಕೂ ಮುನ್ನ ಸಂಕೇತಗಳು, ಗುಹಾಂತರ ಚಿತ್ರಕಲೆಗಳು, ಕಲ್ಲು ಕೊರೆತ, ಚಿತ್ರ ಸಂಕೇತಗಳು ಮುಂತಾದ ಪ್ರಕಾರಗಳನ್ನು ಸಂವಹನಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು.

ಹೀಗೆಯೆ ಸಮಾಜದ ಆಗುಹೋಗುಗಳನ್ನು ‘ಕಾವಲುನಾಯಿ’ಯೋಪಾದಿಯಲ್ಲಿ ಜನರಿಗೆ ತಲುಪಿಸುವ ಕೈಂಕರ್ಯ ನಮ್ಮ ಮಾಧ್ಯಮಗಳದ್ದು. ಮಾಧ್ಯಮಗಳು ಯಾವುದೇ ಸಾಂವಿಧಾನಿಕ ಇಲ್ಲವೇ ಶಾಸನಬದ್ಧ ಅಧಿಕಾರ ಹೊಂದಿಲ್ಲದೇ ಇದ್ದರೂ ಸಮಾಜವನ್ನು ತಿದ್ದಿ ರೂಪಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇಂತಹ ಮಾಧ್ಯಮಗಳಿಗೆ ಪೂರಕವಾಗಿ ಜತೆಜತೆಗೆ ನಡೆಯುವಂತಹ ಸಂಸ್ಥೆಯ ಅಗತ್ಯವನ್ನು ಮನಗಂಡ ಮಾಜಿಮುಖ್ಯಮಂತ್ರಿ ದಿವಂಗತ ಆರ್. ಗುಂಡೂರಾವ್ ಅವರು ಪಿ.ರಾಮಯ್ಯ, ಬೆ.ಸು.ನಾ. ಮಲ್ಯ, ಎನ್.ಎಸ್. ಶಿವಪ್ರಸಾದ್. ಎಚ್.ಆರ್. ಮಲ್ಲಾರಾಧ್ಯ ಇವರುಗಳನ್ನೊಳಗೊಂಡ ಅಧ್ಯಯನ ಸಮಿತಿಯನ್ನು ನೇಮಿಸಿದರು. ಅಧ್ಯಯನ ಸಮಿತಿಯ ಶಿಫಾರಸುಗಳನ್ನು ಆಧರಿಸಿ 1982ರಲ್ಲಿ ‘ಕರ್ನಾಟಕ ಪತ್ರಿಕಾ ಅಕಾಡೆಮಿ’ ಅಸ್ತಿತ್ವ ಪಡೆದುಕೊಂಡಿತು.

ಇತ್ತೀಚಿನ ನವೀಕರಣ​ : 07-08-2021 02:45 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಾಧ್ಯಮ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080