ಅಭಿಪ್ರಾಯ / ಸಲಹೆಗಳು

ಕೂಡ್ಲಿ ಗುರುರಾಜ

1966 ಮಾರ್ಚ್ 04 ರಂದು ಜನನ,.

 

ಹಿರಿಯ ಪತ್ರಕರ್ತರಾಗಿ ಕಳೆದ 34 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕನ್ನಡ ಪ್ರೆಸ್ ಡಾಟ್ ಕಾಮ್ ಹಿರಿಯ ವಿಶೇಷ ಪ್ರತಿನಿಧಿಯಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

 

ಮೈಸೂರಿನ ಆರತಿ ದಿನಪತ್ರಿಕೆಯಿಂದ ೧೯೮೭ರಲ್ಲಿವರದಿಗಾರನಾಗಿ ವೃತ್ತಿ ಜೀವನ ಆರಂಭ. ಮೈಸೂರು ಮಿತ್ರ, ಆಂದೋಲನ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ದಿ ಟೈಮ್ಸ್ ಆಫ್ ಇಂಡಿಯಾ (ಕನ್ನಡ), ವಿಜಯ ನೆಕ್ಸ್ಟ್, ವಿಜಯ ಕರ್ನಾಟಕ  ಪತ್ರಿಕೆಗಳಲ್ಲಿವರದಿಗಾರ, ಮುಖ್ಯ ವರದಿಗಾರ, ಹಿರಿಯ ವಿಶೇಷ ಪ್ರತಿನಿಧಿ, ರಾಜಕೀಯ ಸಂಪಾದಕರಾಗಿ ಕಾರ್ಯನಿರ್ವಹಣೆ.

 

                ಎಲೆಕ್ಟ್ರಾನಿಕ್ ಮೀಡಿಯಾ ಅನುಭವ

ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ  ಪ್ರಚಲಿತ ಎಂಬ ಕಾರ್ಯಕ್ರಮದಡಿಯಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಸಾರವಾದ  ಸುಮಾರು ೧೦೦ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಣೆ. ಮೈಸೂರಿನ ನ್ಯೂಸ್ ೧ ಕನ್ನಡ ವಾಹಿನಿಯಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಗಣ್ಯರ ಸಂದರ್ಶನ. ನಾನಾ ಮಾಧ್ಯಮ ಸಂಸ್ಥೆಗಳು ಮಾಧ್ಯಮ ಕ್ಷೇತ್ರ ಕುರಿತು ನಡೆಸಿದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ.

 

ಬೋಧನೆ

 ಕರ್ನಾಟಕದ  ವಿವಿಧ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಅನುಭವ

ಪುಸ್ತಕ ಪ್ರಕಟಣೆ

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಿಸಿರುವ  ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ, ಮೈಸೂರಿನ ಅನನ್ಯ ಪುಸ್ತಕ ಪ್ರಕಾಶನ ಸಂಸ್ಥೆ  ಪ್ರಕಟಿಸಿರುವ  ಸುದ್ದಿ ಬರಹ ಮತ್ತು ವರದಿಗಾರಿಕೆ.

 

ಪ್ರಶಸ್ತಿಗಳು

ಬೆಂಗಳೂರಿನ ಸಿಡಿಎಲ್ ಸಂಸ್ಥೆ ನೀಡುವ ಚರಕ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮೈಸೂರು ಜಿಲ್ಲಾಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ರೋಟರಿ ಮಿಡ್ಟೌನ್ ಕೊಡಮಾಡುವ ರೋಟರಿ ಸಿಲಿಕಾನ್ ಪ್ರಶಸ್ತಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ನೀಡುವ ವಿಜಯದುಂಧುಬಿ ಪ್ರಶಸ್ತಿ, ಕಲಬುರಗಿಯಲ್ಲಿ ಫೆಬ್ರವರಿ ೨೦೨೦ರಲ್ಲಿ  ನಡೆದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ನಾಡು, ನುಡಿಗೆ ಸಲ್ಲಿಸಿದ ಸೇವೆಗಾಗಿ ಸನ್ಮಾನ ಸ್ವೀಕಾರ.

 

ಮೊಬೈಲ್ ನಂ : 7760563260

 

 

.

ಇತ್ತೀಚಿನ ನವೀಕರಣ​ : 26-10-2021 11:37 AM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಾಧ್ಯಮ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080