ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕನ್ನಡ ಪತ್ರಿಕೋದ್ಯಮ ೧೭೫ ವರ್ಷಗಳಿಗಿಂತಲೂ ಹೆಚ್ಚಿನ ಸುದೀರ್ಘವಾದ ಇತಿಹಾಸ ಹೊಂದಿದೆ. ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಯು ವಿಸ್ತಾರವಾಗಿದ್ದರೂ, ಅದಕ್ಕೊಂದು ನಿರ್ದಿಷ್ಟ ಆಯಾಮವನ್ನೊದಗಿಸುವ, ಅದರ ಬೆಳವಣಿಗೆಗೆ ಉತ್ಕೃಷ್ಟತೆಯನ್ನು; ಇತರ ಭಾಷಾಪತ್ರಿಕೋದ್ಯಮಗಳ ಸಮಸಮಕ್ಕೆ ಸಾಗಬಲ್ಲ ಛಾತಿಯನ್ನು; ತಂದುಕೊಡಲೆತ್ನಿಸುವ ಪ್ರಯತ್ನದ ಅವಶ್ಯಕತೆ ಇದ್ದೇ ಇತ್ತು. ಈ ಅಗತ್ಯತೆ ಹಿನ್ನೆಲೆಯಲ್ಲಿ ಜನ್ಮ ತಳೆದದ್ದು ಕರ್ನಾಟಕ ಪತ್ರಿಕಾ ಅಕಾಡೆಮಿ. ಅದು ಈಗ ಕರ್ನಾಟಕ ಮಾಧ್ಯಮ ಅಕಾಡೆಮಿಯಾಗಿದೆ.

 

                ಕೇರಳ ಮತ್ತು ಆಂಧ್ರ ರಾಜ್ಯಗಳಲ್ಲಿ ಪತ್ರಿಕೋದ್ಯಮಕ್ಕೆ ಸಂಬAಧಿಸಿದ ಚಟುವಟಿಕೆಗಳನ್ನು ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಿ ಆಗ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ಶಿಫಾರಸ್ಸುಗಳೊಂದಿಗೆ ಕೇರಳದ ಪತ್ರಿಕಾ ಅಕಾಡೆಮಿ ಮಾದರಿಯಲ್ಲೇ ರಾಜ್ಯದಲ್ಲೂ ಪತ್ರಿಕಾ ಅಕಾಡೆಮಿಯನ್ನು ಸ್ಥಾಪಿಸಲಾಯಿತು.  ತರುವಾಯ ಕರ್ನಾಟಕ ಮಾಧ್ಯಮ ಅಕಾಡೆಮಿಯೆಂದು ಸರ್ಕಾರ ಮರುನಾಮಕರಣ ಮಾಡಲಾಗಿದೆ.

 

ಅಕಾಡೆಮಿಯ ದೃಷ್ಟಿಕೋನ, ಅಭಿಯಾನ ಹಾಗೂ ಉದ್ದೇಶಗಳು

 

  • ಕರ್ನಾಟಕ ಮಾಧ್ಯಮ ಅಕಾಡೆಮಿ ಮೂಲ ಉದ್ದೇಶ ಪತ್ರಕರ್ತರಲ್ಲಿ ವೃತ್ತಿ ನೈಪುಣ್ಯ ಹೆಚ್ಚಿಸುವುದು ಪತ್ರಿಕೋದ್ಯಮದ ಗುಣಮಟ್ಟವನ್ನು ಸುಧಾರಿಸಲು ಯತ್ನಿಸುವುದು. ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಎಲ್ಲಾ ರೀತಿಯ ಪ್ರೌಢ ಅಭ್ಯಾಸ ಮತ್ತು ಸಂಶೋಧನೆಗೆ ಒತ್ತು ನೀಡಿ ಫೆಲೋಶಿಪ್‌ಗಳ ಮೂಲಕ ಅವಕಾಶ ಒದಗಿಸುವುದು.

 

  • ಪತ್ರಕರ್ತರಿಗೆ ತರಬೇತಿ ಶಿಬಿರ ಏರ್ಪಡಿಸುವುದು, ಕಾರ್ಯಸುಧಾರಣಾ ಶಿಬಿರಗಳ ಸಂಘಟನೆ, ಸಲಹಾ ಸೇವೆಯನ್ನೊದಗಿಸುವುದು; ಪುಸ್ತಕಗಳು, ನಿಯತಕಾಲಿಕೆಗಳನ್ನು ಮತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವುದು.

 

  • ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಬಳಕೆಯಲ್ಲಿರುವ ಶಿಕ್ಷಣ ವ್ಯವಸ್ಥೆಯಲ್ಲಿ

ಪತ್ರಿಕೋದ್ಯಮ ಕಲಿಕೆಗೆ ಸೂಕ್ತವಾದ ಪಠ್ಯಕ್ರಮವನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸುವುದು.

 

  • ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಈ ಕ್ಷೇತ್ರಕ್ಕೆ ಘನತೆಯನ್ನು ತಂದುಕೊಟ್ಟAತಹ ವ್ಯಕ್ತಿಗಳನ್ನು ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡುವುದು. ಆ ಮೂಲಕ ಅವರ ಸೇವೆಯನ್ನು ಗೌರವಿಸುವುದು.

 

  • ಸರ್ಕಾರದಿಂದ, ವ್ಯಕ್ತಿಗಳಿಂದ ಅಥವಾ ಸಂಸ್ಥೆಗಳಿದ ಪತ್ರಿಕೋದ್ಯಮದ ಬೆಳವಣಿಗೆಗೆ ಅನುಕೂಲವಾಗುವಂತೆ ದಾನವನ್ನು, ಕೊಡುಗೆಗಳನ್ನು ಮತ್ತು ಅನುದಾನ ಪಡೆದು ಅಕಾಡೆಮಿಯ ಮೂಲ ಉದ್ದೇಶಗಳ ಸಾಧನೆಗೆ ಬಳಸುವುದು.

 

 

ಅಕಾಡೆಮಿಯ ಕರ್ತವ್ಯಗಳು ಹಾಗೂ ಕಾರ್ಯಗಳ ಕುರಿತು ಸ್ಥೂಲ ವಿವರಗಳು

 

                ಕರ್ನಾಟಕ ಮಾಧ್ಯಮ ಅಕಾಡೆಮಿಯ ಮುಖ್ಯ ಕರ್ತವ್ಯಗಳೆಂದರೆ ಪತ್ರಕರ್ತರ ವೃತ್ತಿ ನೈಪುಣ್ಯತೆ            ಕೌಶಲ್ಯಾಭಿವೃದ್ಧಿಗಳನ್ನು ಬಲಪಡಿಸುವುದು.

 

೧.          ತರಬೇತಿಗಳ ಮೂಲಕ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದ ಪತ್ರಕರ್ತರಿಗೆ ತರಬೇತಿ ನೀಡುವ ಮೂಲಕ ವೃತ್ತಿಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಉತ್ತೇಜನ ನೀಡಲಾಗುವುದು.

 

೨.          ಪ್ರಚಲಿತ ವಿದ್ಯಮಾನಗಳ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಪತ್ರಕರ್ತರಿಗೆ ವಿದ್ಯಮಾನಗಳ ಅರಿವು ಮೂಡಿಸುವುದು.

 

೩.          ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಆ ಕ್ಷೇತ್ರಕ್ಕೆ ಘನತೆ ತಂದುಕೊಟ್ಟ ಪತ್ರಕರ್ತರಿಗೆÀ ಪ್ರೋತ್ಸಾಹಿಸಲು ಪ್ರಶಸ್ತಿ ನೀಡುವುದು.

 

೪.          ಕನ್ನಡ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಗುರುತಿಸಲು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಪುಸ್ತಕಗಳನ್ನು ಪ್ರಕಟಿಸುವುದು.

 

೫.          ತಂತ್ರಜ್ಞಾನ, ಛಾಯಾಗ್ರಹಣ, ವ್ಯಂಗ್ಯಚಿತ್ರ ಕಲೆ ಅನೇಕ ವಿವಿಧ ವಿಷಯಗಳ ಕುರಿತು ಪತ್ರಕರ್ತರಿಗೆ ತರಬೇತಿ ನೀಡುವುದು.

 

೬.          ಅನೇಕ ರಾಜ್ಯ-ರಾಷ್ಟç ಮಟ್ಟದ ವಿಚಾರ ಸಂಕಿರಣ ಮತ್ತು ಸಂವಾದಗಳನ್ನು ಏರ್ಪಡಿಸುವುದು.

 

೭.          ಡಿಜಿಟಲ್ ಗ್ರಂಥಾಲಯ ಸ್ಥಾಪಿಸುವುದು.

 

೮.          “ಪತ್ರಿಕಾ ದಿನಾಚರಣೆ ಹಾಗೂ ರಾಷ್ಟಿçÃಯ ಪತ್ರಿಕಾ ದಿನಾಚರಣೆಯನ್ನು ಆಚರಿಸುವುದು.

 

೯.          ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಪತ್ರಕರ್ತರಿಗೆ ವಿಶೇಷ ತರಬೇತಿ ಏರ್ಪಡಿಸುವುದು. ವಿವಿಧ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಶಿಷ್ಯವೇತನ ಸಹಿತ ಸ್ಕಾಲರ್‌ಶೀಪ್ ತರಬೇತಿ ನೀಡುವುದು.

 

೧೦.     ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆ ಅಡಿಯಲ್ಲಿ ವಿವಿಧ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವುದು.

 

೧೧.     ಮಹಿಳಾ ಪತ್ರಕರ್ತರಿಗೆ ತರಬೇತಿ ನೀಡುವುದು.

 

೧೨.     ಹಿರಿಯ ಪತ್ರಕರ್ತರ ಪರಿಚಯವನ್ನೊಳಗೊಂಡ ಸಾಕ್ಷö್ಯಚಿತ್ರ ನಿರ್ಮಾಣ.

ಇತ್ತೀಚಿನ ನವೀಕರಣ​ : 14-09-2021 04:37 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಾಧ್ಯಮ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080